ಹುಟ್ಟಿದ್ದು ಬೆಂಗಳೂರೆ ಆದರೆ ಬೆಳೆದಿದ್ದು, ಕಲಿತದ್ದು ಒಂದು ವಿಚಿತ್ರ. ಆರರವರೆಗೂ ಬೆಂಗಳೂರಿನ ’ಜ್ಞಾನೋದಯ’. ನಂತರ ಶಾಲಾ ಶಿಕ್ಷಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ. ಕಾಲೇಜು ಹಂತದ ಮೊದಲ ಭಾಗ ಪಿ.ಯು.ಸಿ ಶಿಕ್ಷಣ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ. ನಂತರ ಪದವಿ ಪಡೆದದ್ದು ಬಿ.ಎಚ್.ಎಸ್ ಕಾಲೇಜಿನಿಂದ. ಈಗ ಸಧ್ಯಕ್ಕೆ ಬೆಂಗಳೂರಿನ ವಿಶ್ವವಿದ್ಯಾಲಯದ ವಿದ್ಯುನ್ಮಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗೆ ವ್ಯಾಸಂಗ.
ವರ್ಣರಂಜಿತ ವಿಭಿನ್ನ ವ್ಯಕ್ತಿತ್ವ
ಎಂಥವರನ್ನೂ ಮಾತಿಗಿಳಿಸುವುದು ಇವನ ತತ್ವ
ಎಲ್ಲೆಂದರಲ್ಲಿ ಹೊರಡಿಸುವನು ಹಾಡಿನ ಗುನುಗು
ಮಾಡುವ ತರ್ಕಗಳಿಗೆ ಕೇಳುವರೆಲ್ಲಾ ನಿಬ್ಬೆರಗು.
ಗದಗದ ಸಾಹಿತ್ಯ ಸಮ್ಮೇಳನದ ಯಶಸ್ವಿ ಪಯಣದ ನಂತರ ಮತ್ತೆ ಅ ಮತ್ತು ಆ ಜೊತೆಗೂಡಿ ಸನ್ನದ್ಧವಾಗಿದೆ. ಕನ್ನಡದ ಈ ಮೊದಲ್ನುಡಿ, ತೊದಲ್ನುಡಿ ಇಲ್ಲದೆ ಮಾತು ಇಲ್ಲವಲ್ಲ..ಹಾಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಒಂದು ಮೊದಲ ನುಡಿ ಬರೆಯಲು ಈ ಅಕ್ಷರಗಳು ಸಜ್ಜಾಗಿವೆ.
ಅವಧಿ ಮತ್ತು ಆಲೆಮನೆ ಎರಡೂ ಜೋಡಿಯಾದ ಪರಿಣಾಮವೇ ‘ನುಡಿ ನಮನ’.
77ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗುತ್ತಿರುವ ಬೆಂಗಳೂರನ್ನು ಆಲೆಮನೆಯ ಇರುವೆಗಳು ಸುತ್ತು ವರಿದು ಕ್ಷಣ-ಕ್ಷಣದ ಮಾಹಿತಿಯನ್ನು ಹೊತ್ತು ತರಲಿವೆ.
.
ಆಲೆಮನೆಯ ಇರುವೆಗಳ ಕನ್ನಡದ ಗೂಡು "ನುಡಿನಮನ" ಕಟ್ಟಿ ಇಂದಿಗೆ ಒಂದು ವರ್ಷ......ಈ ಸುಸಂದರ್ಭದಲ್ಲಿ ಆಲೆಮನೆ ಇರುವೆಗಳ ಗುಂಪು ಮತ್ತಷ್ಟು ಉತ್ಸಾಹಿ ಗೆಳೆಯರೊಂದಿಗೆ ದೊಡ್ಡ ಸೇನೆಯನ್ನೇ ನಿರ್ಮಿಸಿಕೊಂಡು, ಬೆಂಗಳೂರಿನಲ್ಲಿ ಆರಂಭಗೊಳ್ಳಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಸುತ್ತುವರಿಯಲು ಸನ್ನದ್ಧವಾಗಿದೆ. ಈ ಯುವ ಮನಸ್ಸುಗಳಿಗೆ ಚಿಲುಮೆಯ ಚೂಯಿಂಗಮ್ ನೀಡುತ್ತಿರುವ 'ಅವಧಿ'ಯ ಜಿ.ಎನ್. ಮೋಹನ್ರವರಿಗೆ ನುಡಿನಮನದ ಮುಖೇನ ನಮಿಸುತ್ತಿದ್ದೇವೆ.
ಡಿಸೆಂಬರ್ ನಿಂದ ಜನವರಿಗೆ ಬಂದು ಅಲ್ಲಿಂದ ಒದ್ದಾಡಿ ಫೆಬ್ರವರಿಯಲ್ಲೇ ದಿನಾಂಕ ಗಟ್ಟಿಯಾಗಿ ಸಮ್ಮೇಳನದ ಸಿದ್ಧತೆಗಳು ತ್ವರಿತಗತಿಯಲ್ಲಿ ಸಾಗಿವೆ. ಸಿಲಿಕಾನ್ ವ್ಯಾಲಿಯೆಂದೇ ಹೆಸರಾಗಿರುವ ಬೆಂಗಳೂರು ಐಟಿ-ಬಿಟಿ ಕಂಪೆನಿಗಳಿಂದ ತುಲುಕುತ್ತಿದ್ದರೂ ಅಗತ್ಯವಾದ ಹಣದ ನೆರವು ಕನ್ನಡದ ಕೆಲಸಕ್ಕೆ ದೊರೆಯದೇ ಇರುವುದು ನೋವಿನ ಸಂಗತಿ. ಕೈಯ್ಯಲ್ಲಿರುವ ಹಣದಿಂದಲೇ ನಲ್ಲೂರ್ ಪ್ರಸಾದ್ರವರು ಕೆಲಸ ಪ್ರಾರಂಭಿಸಿದ್ದು ಹಿರಿಯ-ಕಿರಿಯ ಸಾಹಿತ್ಯಾಸಕ್ತರು ಹಿನ್ನೆಲೆಯಲ್ಲಿ ದುಡಿಯುತ್ತಿರುವುದು 77ನೇಯ ಕನ್ನದ ಸಾಹಿತ್ಯ ಸಮ್ಮೇಳನಕ್ಕೆ ಒಂದು ವಿಶೇಷ ಕಳೆ ಕಟ್ಟುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಸಾಹಿತ್ಯ ಸಮ್ಮೇಳನವೆಂದರೆ ಅದೇನೋ ಒಂದು ಹುರುಪಿನ ಸಂಚಲನ, ಯುವಕರಲ್ಲಿ ಹಬ್ಬದ ಉತ್ಸಾಹ, ತಮ್ಮದನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳಲು ತವಕಿಸುವ ಸಾಹಿತಿಗಳ ಗುಂಪು, ಓದುಗ ಪ್ರೇಮಿಗಳಿಗೆ ಪುಸ್ತಕ ಮೇಳದಲ್ಲಿ ಮುಳುಗುವ ಸದಾವಕಾಶ, ಎಲ್ಲವನ್ನೂ ನೋಡುತ್ತಾ, ಓಡಾಡುತ್ತಾ, ಭೋಜನದ ಬಗೆಗೆ ಗಮನ ಹರಿಸೋ ತಿಂಡಿ ಪ್ರಿಯರು, ವ್ಯಾಪಾರಿಗಳಿಗೆ ಸರಕು ಖಾಲಿ ಮಾಡೊ ಸುಗ್ಗಿ ಕಾಲ, ಹೀಗೆ ಇದು ಜಾತ್ರೆಯೋ, ಹಬ್ಬವೋ, ಸಂತೆಯೋ, ಮೇಳವೋ............ ಏನೆಂದು ನೀವೇ ಅರ್ಥೈಸಿಕೊಳ್ಳಬೇಕು.
ಆಲೆಮನೆ ಬಳಗ ಇನ್ನು ಕೆಲವೆ ನಿಮಿಷಗಳಲ್ಲಿ ಚಿತ್ರ ಹಾಗು ವೀಡಿಯೋ ಸಮೇತವಾಗಿ ನಿಮಗೆ ಸಮ್ಮೇಳನದ ಬೆಲ್ಲದ ಸವಿಯನ್ನು ಉಣಬಡಿಸಲಿದೆ.
ಹಾ.........ನಿಮ್ಮ ಸ್ನೇಹಿತರು, ಮನೆ-ಮಂದಿ ಎಲ್ಲರಿಗೂ ಈ ಸುದ್ದಿ ಮುಟ್ಟಿಸಿ, ಬೇಗ ಬೇಗ ಸಿದ್ಧರಾಗಿ ಕುಳಿತಿರಿ....... ಅದೋ ನಮ್ಮ ಇರುವೆಗಳ ಸಾಲು ಶಿಸ್ತಿನಿಂದ ಇತ್ತಲೇ ಬರುತ್ತಿದೆ........
"ದೋಣಿ ಮುಳುಗಿ ಹೋಯ್ತು ಅದರ ಪರಿವೇ ಇಲ್ಲ,
ದೋಣಿ ಎಲ್ಲಿ ಮುಳುಗಿತ್ತೋ ಅಲ್ಲಿ ನೀರೆ ಇಲ್ಲ".
-ಇಂತಹ ಕವನ ಬರೆಯೋದರಲ್ಲಿ ಎತ್ತಿದ ಕೈ.
ಪುಸ್ತಕ ಸಂಗ್ರಹವೆಂದರೆ ಬಲು ಪ್ರೀತಿ
ಓದಿ ಅಪ್ಪನೊಂದಿಗೆ ಚರ್ಚೆಗಿಳಿವುದು ರೀತಿ
ಕಥೆ, ಕವನ, ಬರವಣಿಗೆಗಳೇ ಇವರ ನೀತಿ.
ಬೆಂಗಳೂರಿನ ಅಜ್ಜಿಯ ಮನೆಯೇ ಅಚ್ಚುಮೆಚ್ಚು
ಬಂದರೆ ಊರಿಂದ ಫೋನ್ ಮೊಗವಾಗುವುದು ಪೆಚ್ಚು;
ಎಲೆಕ್ಟ್ರಾನಿಕ್ಸ್ ಎಂದು ಎಲೆಕ್ಟ್ರಾನಿಕ್ ಮೀಡಿಯಾ ಸೇರಿದ ಮಹನೀಯೆ
ಈಗ ಸ್ಟುಡಿಯೋದಲ್ಲೇ ಮುಳುಗಿ ಏಳುವಳು, ಇದೇ ಮೀಡಿಯಾ ಲೀಲೆ.
ಸ್ನೇಹಿತರು ಸುತ್ತಲಿರಲೇಬೇಕೆಂಬ ಹುಚ್ಚು
ಎಫ್.ಎಂ ಕೇಳುತ್ತಾ ನಿದ್ದೆ ಮಾಡುವುದೇ ನೆಚ್ಚು.